ಈಕೆ ಕಚ್ಚಿ ತಿನ್ನುವ ಹಣ್ಣಲ್ಲ,
ಜೀವನವೆಂಬ ಜಟಕಾಬಂಡಿಯ "ಕಣ್ಣು".
ಗತಕಾಲದಲ್ಲಿ ಜೀವತಳೆದ ಮಾತು
ಹೆಣ್ಣು ಎಂದರೆ ಸಮಾಜದ ಕಣ್ಣು
ಮಾತು ತಿರುಗಿಕೊಂಡ ಛಾಪು
ಸಮಾಜದ ಶೋಷಣೆಯ ಕಣ್ಣಿನ್ದು
ಹೆಣ್ಣು ||
ಅತ್ಯಾಚಾರ
ಅತಿಯಾದ ಆಚಾರ ಇಂದಿನ ವ್ಯವಹಾರ
ಮನದೊಳಗೆ ಬೆತ್ತಲೆಯ ಅಜ್ಞಾನದ ಪ್ರವರ
ಬೆಳಕಿನಿಂದ ಕಗ್ಗತ್ತಲೆಗೆ ಧುಮುಕುವ ಸದಾಚಾರ
ತಾಂಡವ ಗೈಯ್ಯುತ್ತಿದೆ ಈ ಹೊಲಸು ಅತ್ಯಾಚಾರ ||
No comments:
Post a Comment