ಕನ್ನಡವೂ ಮಲಗಿಲ್ಲ ನೀವು ಮಲಗದಿರಿ....
ಅಂದಿನ ಪಂಪ ರನ್ನ ಜನ್ನ ಪೊನ್ನ
ಎಂದೆಂದಿಗೂ ಚಿನ್ನ
ವ್ಯಾಸದಾಸ ಕನಕದಾಸ
ಕನ್ನಡದ ಮಹಾಕಾಳಿದಾಸ.
ಸರ್ವಜ್ಞ ಬಂದನು ಬುದ್ದ ನೆದ್ದನು
ಸಂಸ್ಕ್ರತಿಯ ಉಳಿವಿಗಾಗಿ
ಬಸವ ಅಕ್ಕ ಅಲ್ಲಮಪ್ರಭುಗಳು
ಧಂಗೆ ಎದ್ದರು ಸಮಾಜಕ್ಕಾಗಿ
ಧಂಗೆ ಎದ್ದರು ಸಮಾಜಕ್ಕಾಗಿ
ನವ್ಯ ಚರಿತ್ರೆಗೆ ನಾಂದಿ ಹಾಡಿದ ಪುಟ್ಟಪ್ಪ
ಕಗ್ಗದಿಂದಲೇ ಜನಮಾನಸಗೆದ್ದ ಗುಂಡಪ್ಪ
ಕನ್ನಡಕೆ ನಿತ್ಯೋತ್ಸವ ಹರಿಸಿದ ನಿಸಾರ
ಎಂಟು ಜ್ಞಾನಪೀಠ ನಂಟು ಹೊತ್ತ
ಮೊದಲ ಭಾಷೆ ಕನ್ನಡವೇ
ಸುವರ್ಣ ಕಲಶ ತುಂಬಿ ತುಳುಕಿಸಿದ
ಕೇಂದ್ರ ಸಾಹಿತ್ಯ ಕನ್ನಡದು
ಕನ್ನಡಕೆ ಬಂತು ಶಾಸ್ತ್ರೀಯ ಸ್ಥಾನಮಾನ
ತ್ರಿಮೂರ್ತಿಗಳಿಗೆ ರಾಷ್ಟ್ರಕವಿ ಅಭಿದಾನ
ಬೆಳೆಯಬೇಕು ಕನ್ನಡದ ಅಭಿಮಾನ
ಬೆಳೆಯಬೇಕು ಕನ್ನಡದ ಅಭಿಮಾನ
ಕನ್ನಡಿಗರಿಗೆ ಹೆಮ್ಮೆಯ ಬಿಗುಮಾನ
ನವದಶ
ಅಕ್ಷೋಹಿಣಿ ಸೈನ್ಯ ಕಟ್ಟಿದ ಪಂಪ ಸಾಮ್ರಾಜ್ಯ
ಸಾಧನೆಯ ಬಿಸುಟು ಇರುಳಲ್ಲಿ ನಡೆವ
ಮಂಕುಸಾಂಗತ್ಯ
ಹೊಸಬೆಳಕಿನತ್ತ ಹಳೇ ಜೀವ ತೂರಿ
ಅರಳಿದ ಬಾಳೆ ಚೇತನ...,ಅದಾಗಲಿ ಅನೀಕೆತನ...
No comments:
Post a Comment