ಸೋದರ –ಸೋದರಿಯರ ಬಾಂದವ್ಯದ ಪ್ರತೀಕಕ್ಕೆ
ರಕ್ಷೆಯ ನೂಲನ್ನು ಕಟ್ಟಿ, ಜವಾಬ್ದಾರಿಯನ್ನು ಇನ್ನಷ್ಟು ಬಿಗಿಗೊಳಿಸಿ ತಮ್ಮ ಪ್ರೀತಿಯ ಸಂಬಂಧದ
ಮೆಲಕನ್ನು ನನಸಿನ ಲೋಕದಲ್ಲಿಟ್ಟು ಆರಾಧಿಸುವ ಸವಿ
ಸಮಯ ಈ “ರಕ್ಷಾ ಬಂಧನ.
ಈ ದಿನದ ಶೋಭೆಗೆ ನಿದರ್ಶನಗಳು ಹಲವಾರು, ಆ ಸಾಲಿನಲ್ಲಿ
ಸದಾ ಮೆರಗುವ ಸವಿ ಕಾಣಿಕೆಯ ನೆನಹು ಇಲ್ಲಿದೆ. ಅಂದು ಚಿತ್ತೋರ್ ನ ರಾಣಿ ಕರ್ಣಾವತಿ ಒಬ್ಬಾಕೆ
ವಿಧವೆ. ತನ್ನ ಅಸಹಾಯಕ ಸ್ಥಿತಿ ಅರಿತ ಗುಜರಾತಿನ ಸುಲ್ತಾನ ಬಹಾದ್ದೂರ್ ಶಾಹ್ ಆಕ್ರಮಣದ
ರಣಕಹಳೆಯಿಂದ ಬಂಧಿಸಿದ. ಗುಪ್ತಚಾರರ ಮೂಲಕ ಸುದ್ದಿ ತಿಳಿದ ರಾಣಿ ಮೊಘಲ್ ನ ರಾಜ ಹುಮಾಯನ್ ಗೆ ‘ರಕ್ಷೆ’ಯ
ನೂಲನ್ನು ಕಳುಹಿಸಿ ಸಹಾಯಸ್ತ ಬೇಡಿದಳು.ಆತ ಧರ್ಮ,ಜಾತಿಯ ಮರೆತು ತನ್ನ ಸೇನಾ ತುಕಡಿಯನ್ನು ಕರೆದುಕೊಂಡು ‘ರಕ್ಷೆ’ಯ ನೂಲಿಗೆ
ಗೌರವ ಕೊಟ್ಟು ಮೆರೆದ. ಆದರೆ ವಿಧಿಯ ವಿಪರ್ಯಾಸ
ಅವಳ ಬದುಕಿಗೆ ತೆರೆಕಾಣಿಸಿತು. ಆದರು ಜಾತಿ,ಧರ್ಮಗಳ ಭೇದವೆಣಿಸದೆ ಸಹಾಯಸ್ತ ನಿಡುವಹಾಗೆ
ದಾರಿ ತೋರಿದ ಆ ಹೆಮ್ಮೆಯ ಗರಿ, ಈ ‘ರಕ್ಷೆ’ಯ ನೂಲು.

ಎಲ್ಲಾ ಸಹೃದಯೀ ಓದುಗರಿಗೆ “ರಕ್ಷಾ ಬಂಧನ“ದ ಶುಭ ಕಾಮನೆಗಳು .
No comments:
Post a Comment