ಇವರು ಮಥಿಸಿದ ಹಸಿರು, ಅದುವೇ ಕನ್ನಡದ ಪೆಸರು.
ಕರುನಾಡ ನಡುಗಿಸಿದ ಕಲಿಯುಗದ ಮಿಂಚು
ಪಸರಿತು ಕನ್ನಡ ದಿಗಂತದ ಅಂಚು
ನೇರ ಗಾಂಭಿರತೆಯ ದೃಢ
ವ್ಯಕ್ತಿತ್ವ ಹೊತ್ತು
ಕನ್ನಡ ತಾಯೀಗೆ ಸಿರಿಮುಡಿಯಾದ ಮುತ್ತು.
ಕಡಲ ಅಬ್ಬರದಂತೆ ಪರಿಸರವಾದಿ
ಯಕ್ಷಗಾನ ರೂಪಕವು ಇವರಿಂದ ಆದಿ
ಕುಣಿಯದ ತಾಳವಿಲ್ಲ, ರಚಿಸದ ಕೃತಿಯಿಲ್ಲ,
ಗ್ರುಹಿಸದ ವಿಷಯ ಎ ಧರೆಯಲಿಲ್ಲ .
ತೇಜಸ್ಸಿನ ಮೊಗವ ತೊಂಬತ್ತಕ್ಕೆ ತಂದ
ಹುಚ್ಚು ಮನಸಿನ ಹತ್ತು ಮುಖದಲ್ಲಿ ಜೀವನವ ಕಂಡ
ಕೈಗಾದ ಅಣುವಿಗೆ ಇವರಿಂದ ಬಾಧೆ
ನಡೆದಾಡೋ ವಿಶ್ವಕೋಶ ಖ್ಯಾತಿಗೆ ಪಾತ್ರರಾದ .
ಯಕ್ಷಗಾನ ಬಯಲಾಟಕೆ ಕೇಂದ್ರದ ತಿಲಕ
ಮಕ್ಕಳಿಗೆ ಬಾಲವನವ ಪುತ್ತೂರಲ್ಲಿ ತೆರೆದ
ಮಕ್ಕಳಲ್ಲಿ ಮಕ್ಕಳಾಗಿ ನಾ ಎಳೆಯ ಎಂದ .
ಪಂಪ ಸಾಮ್ರಾಜ್ಯಕ್ಕೆ ಅರಸನಾಗಿ ಮೆರೆದಾತ
ಸರಕಾರದ ಅಜಾಗ್ರತೆಗೆ ಸಿಡಿಲಾಗಿ ಬಡಿದಾತ
ಕಡಲತೀರದ ಬಾರ್ಗವನಾಗಿ ಕೊನೆಯುಸಿರೆಳೆದ ಅಜಾತ
ನಮ್ಮ ನವ ತರುಣ... ಕೋಟ ಕಾರಂತ ತಾತ.
No comments:
Post a Comment