Friday, August 15, 2014

ತ್ರಿವರ್ಣ ತ್ರಿವಿಕ್ರಮ


       ಇಂದು ದೇಶದ 68ನೆಯ ಸ್ವಾತಂತ್ರ್ಯ ದಿನಾಚರಣೋತ್ಸವದ  ಸಂತಸದ ಸುಗ್ಗಿಯಲ್ಲಿ ಎಲ್ಲರೂ ಮೈಮರೆತ ಕ್ಷಣ. ಈ
 ಶೋಭೆಗೆ ಕಾರಣಿಕರ್ತಾರಾಗಿ, ತಮ್ಮ ನೆತ್ತರ ಒತ್ತೆಯಿಟ್ಟು ಬುನಾದಿ ಹಾಡಿದ ಸ್ವರ್ಗೆತರಲ್ಲಿ ಹಲವರ ನಾಮದೇಯ ಇನ್ನೂ ಬೂದಿ ಮೂಸುಕಿದ ಕೆಂಡದಂತೆಯೇ ಮರೆಯಾಗಿದೆ.ಅವರ ಅಳಿವಿನ ಆ ‘ಸ್ವಾತಂತ್ರ್ಯ’ ಕೂಡ ಅಧಿಕಾರಿ ಶಾಹಿಗಳ ದಬ್ಬಾಳಿಕೆಯಲ್ಲಿ,ಮೇಲು-ಕಿಳೆಂಬ ನವೆಯಲ್ಲಿ, ಪಾಶ್ಚಾತ್ಯರ ಅನುಸಂಧಾನದ ಎಂಜಲಿನ ತಕ್ಕಡಿಯಲ್ಲಿ ತನ್ನ ಮಾನ ಕಳಚಿಕೊಂಡು ಕೂತಿದೆ. ಅಂದಿನ ಹಿರಿಯರ ಭವ್ಯ ರಾಷ್ಟ್ರದ ಚಿಂತನೆಗಳು, ಇವತ್ತು ಚಿತೆಯ ಮೇಲೆ ಚಿಂತೆಯಾಗಿ ಮಲಗಿದೆ.

“ಪಿಂಗಳಿ ವೆಂಕಯ್ಯ”
          ಬಿಸಿನೆತ್ತರಿನ ನಮ್ಮ ಯುವ ಜನತೆ  ಸಂಕಷ್ಟದ ಸಂಕೋಲೆಗಳನ್ನು ದಾಟಬೇಕಾಗಿದೆ. ಅರಿವಿನ ಸಿದ್ಧಿಗೆ ಭ್ರಮರದಂತೆ ಹೂಗಳ ಸುಗಂಧ ಹಿರಬೇಕಾಗಿದೆ. ಅಂತಹ ಹೂಗಳು ಬಾಡಿದರೂ, ತನ್ನ ಮಾಸದ ಸುಗಂಧದ ಕಂಪಿಂದು ಎಲ್ಲೆಡೆ ಪಸರಿಸುತ್ತ ಬೆಳಕಾಗುತ್ತಿದೆ. ಆ ಸಾಲಿನಲ್ಲಿ ಮೆರೈಸಿದರೂ ಯಾರೂ ಕಂಡರಿಯದ ಮಹತೇಜ ದೇಶದ ಏಕತೆಗಾಗಿ, ಭಾರತೀಯರ ಧೈನ್ಯತೆಗಾಗಿ, ನಮ್ಮ ಕ್ರಾಂತಿ, ಶಾಂತಿ ಮತ್ತು ಸಮೃದ್ಧಿ ಅಸ್ತ್ರವ ಸೂಚಿಸುವ, ದೈನಂದಿನ 24 ಗಂಟೆಗಳ ಎಚ್ಚರ ಗಂಟೆಯನ್ನು ಸದಾ ಮೊಳಗಿಸುವ ನಮ್ಮ ಕೇಸರಿ,ಬಿಳಿ ಮತ್ತು ಹಸಿರು ತ್ರಿವರ್ಣ ರಾಷ್ಟ್ರ ಧ್ವಜದ ವಿನ್ಯಾಸಕಾರ, ತಿರಂಗದ ನೇತಾರ ಶ್ರೀಯುತ “ಪಿಂಗಳಿ ವೆಂಕಯ್ಯ”ನ  ಸ್ಮರಣೆ ಅಕ್ಷಿಯ ಬೊಂಬೆಯಲ್ಲಿ ಚಿತ್ತಾರ ಕುಂಚದಲ್ಲಿ ಬಿತ್ತನೆ ಅಗತ್ಯ ತೋರಿದೆ.
              ದೀಪವಾರಿದ ಕಂಗಳಲ್ಲಿ ಮತ್ತೆ ದೀಪಗಳ ಬೆಳಕ ಬೆಳಗಿಸುವ ಕೈಂಕರ್ಯ, ಗಾಂಧೀಜಿಯ ರಾಮ ರಾಜ್ಯದ, ಗ್ರಾಮ ರಾಜ್ಯದ ಕನಸು ಹಳ್ಳಿ-ಹಳ್ಳಿಗಳಲ್ಲಿ, ಬಯಲು ಆಲಯಗಳಲ್ಲಿ ನನಸಾಗಿಸುವ ದಿಶೆ ನಮ್ಮದಾಗಲಿ ಎಂದು ಪ್ರತಿಜ್ನೆಗೈಯ್ಯುತ್ತಾ, ಸ್ವಾತಂತ್ರ್ಯ ಪೂರ್ವ ಸಂಘರ್ಷದ ಚಾರಿತ್ರಿಕ ಹಿನ್ನಲೆಯ ಸೊಗಡನ್ನಾ ಒಂದೊಮ್ಮೆಯಾದರು ನೆನೆಯೋಣ ಬನ್ನಿ.

            ಪ್ರೀಯ ನಗಾರಿಯ ಕೇಳುಗರಿಗೆ  68ನೇಯ ಸ್ವಾತಂತ್ರ್ಯ ದಿನಾಚರಣೆಯ  ಹಾರ್ದಿಕ ಶುಭಾಶಯಗಳು.

No comments:

Post a Comment