Friday, August 22, 2014

“ಚಿಕ್ಕಮಗಳೂರಿನ ಎಲೆಮರೆಯ ಗಾನಪ್ರತಿಭೆ – ಎಂ.ವೈ.ನಿಶ್ಚಿತ”


         ಸಮುದ್ರದಾಳದಲ್ಲಿ  ಕಂಗೊಳಿಸುವ ಮುತ್ತು, ಅಂಬರದಲ್ಲಿ ಮಿನುಗುವ ತಾರೆ, ಹಾಗೇ ಕಾಫೀ ತವರು ಚಿಕ್ಕಮಗಳೂರಿನಲ್ಲೊಂದು ಎಲೆಮರೆಯ ಗಾನಕೋಗಿಲೆ, ‘ಅಸಾಧಾರಣ ಬಾಲಪ್ರತಿಭೆ ‘ ಎಂದು ಪುರಸ್ಕೃತಗೊಂಡ ಶ್ರೀಮತಿ 
ಶೈಲಜಾ ಮತ್ತು ಶ್ರೀ ಎಂ.ಎಸ್.ಯತಿರಾಜ್ ದಂಪತಿಗಳ ಪುತ್ರಿ ಎಂ.ವೈ.ನಿಶ್ಚಿತ.
            ಬಾಲ್ಯದಿಂದಲೂ ಸಂಗೀತದತ್ತ ಓಲುಮೆ ತೋರಿಸಿದ  ಈಕೆ ತನ್ನ ಶಿಕ್ಷಣದ ಜೊತೆ ಕರ್ನಾಟಕ ಶಾಸ್ತ್ರಿಯ ಸಂಗೀತವನ್ನು ಶ್ರೀಯುತ ಧನಂಜಯಯವರಿಂದ, ಜನಪದ, ಭಾವಗೀತೆ,ಚಿತ್ರಗೀತೆಗಳನ್ನು ಶ್ರೀಮತಿ ರಶ್ಮಿಮಂಜುನಾಥರವರಲ್ಲಿ ಕಲಿತು.’ಕರ್ನಾಟಕ ಶಾಸ್ತ್ರಿಯ’ ಸಂಗೀತದ ಜೂನಿಯರ್ ವಿಭಾಗವನ್ನು ಪ್ರಥಮ  ಶ್ರೇಣಿಯೊಂದಿಗೆ ತೇರ್ಗಡೆಯಾಗಿ, ಪ್ರಸ್ತುತ ಸಿನಿಯರ್ ವಿಭಾಗವನ್ನು ಅಭ್ಯಾಸ ಮಾಡುತ್ತಿದ್ದಾಳೆ.
                ಚಿಕ್ಕಮಗಳೂರು ಜಿಲ್ಲೆಯ ಸುಗಮ ಸಂಗೀತ ಶಿಬಿರದಲ್ಲಿ ಭಾಗವಹಿಸಿ, ಬೆಂಗಳೂರಿನ ಸ್ವರ ಸುರಭಿ ಟ್ರಸ್ಟ್ ಹಮ್ಮಿಕೊಂಡ ‘ಹಾಡುತ್ತಿರುವಾಗ’, ’ಹಾಡುತ್ತೀವಿರಾಗ’, ’ಹಾಡಬನ್ನಿಗೀತೆಯ’ ಮುಂತಾದ ಕಾರ್ಯಕ್ರಮಗಳಲ್ಲಿ ರಾಜ್ಯದಾದ್ಯಂತ ಪ್ರದರ್ಶನ ನೀಡಿರುತ್ತಾಳೆ.  ನಾಡಿನ ಸಂಗೀತಲೋಕದ ದಿಗ್ಗಜರಾದ ಶ್ರೀಯುತ ಕೆ.ಅಶ್ವತ್, ಯಶವಂತ ಹಳಿಬಂಡಿ, ಶ್ರೀಮತಿ ಜಯಶ್ರೀ ಅರವಿಂದ, ಶಿವಮೊಗ್ಗ ಸುಬ್ಬಣ್ಣ ಮುಂತಾದವರು ನೆಡಸಿಕೊಟ್ಟಿರುವ ಸಂಗೀತ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡು, ಶ್ರೀಯುತರ ಪ್ರಶಂಸೆಗೆ ಪಾತ್ರರಾದ ಹೆಗ್ಗಳಿಕೆ ಕುಮಾರಿ ನಿಶ್ಚಿತಳದು.
                ಮಹಿಳಾ ಮತ್ತು ಮಕ್ಕಳ ಅಭಿವ್ರುದ್ಧಿ ಇಲಾಖೆಯಿಂದ ರಾಜ್ಯಮಟ್ಟದ “‘ಅಸಾಧಾರಣ ಬಾಲಪ್ರತಿಭೆ” ಪುರಸ್ಕಾರ, ಸಂಗೀತ ಮತ್ತು ಶೈಕ್ಷಣಿಕ ಕ್ಷೇತ್ರದ ಅನುಪಮ ಸೇವೆಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಜ್ಞಾನಶ್ರಿ ರಾಜ್ಯ ಪ್ರಶಸ್ತಿ”, ಕೀರ್ತಿ ಪ್ರಕಾಶನದ ‘ಕನ್ನಡದ ಕೀರ್ತಿಶ್ರಿ’ ಇನ್ನು ಹಲವರು ಪ್ರಶಸ್ತಿ ಭಾಜಿಸಿದ ಈ ಎಲೆಮರೆಯ ಪ್ರತಿಭೆ, ರಾಜ್ಯಮಟ್ಟದ ವಚನ ಗಾಯನ ಸ್ಪರ್ಧೆ, ವರಕವಿ ಬೇಂದ್ರೆ ಸುಗಮ ಸಂಗೀತ ಸ್ಪರ್ಧೆ, ಜಿಲ್ಲಾ  ಕಲಾಪ್ರತಿಭೋತ್ಸವಗಳಲ್ಲಿ ಬಹುಮಾನಗಳಿಸಿ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇದಲ್ಲದೆ ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾ ಸಾಹಿತ್ಯ ದಿನಾಚರಣೆ ಸಮಿತಿ, ಇಂಟರನ್ಯಾಷನಲ್  ಲೈಬ್ರೆರಿ ಮತ್ತು ಚಿಲ್ಡ್ರನ್ಸ್ ಡೇ,   ಶ್ರೀ ಮಂಜುನಾಥೇಶ್ವರ ವಿದ್ಯಾಕೇಂದ್ರ, ರತ್ನಗಿರಿ ಗಾರ್ಡನ್ ಟ್ರಸ್ಟ್, ಸುವರ್ಣ ಸಂಸ್ಕೃತಿ  ದಿಬ್ಬಣ -2006, ಜಿಲ್ಲಾಮಟ್ಟದ ಯುವಜನೋತ್ಸವ ಇನ್ನು ಹಲವಾರು ಸಂಘ-ಸಂಸ್ಥೆಗಳು,ಶಾಲಾ-ಕಾಲೇಜುಗಳಲ್ಲಿ  ನಡೆದ ಗಾಯನ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಕೋರಳಿಗೇರಿಸಿದ್ದಾಳೆ.

             ಅದಲ್ಲದೆ ಇಂಟರನ್ಯಾಷನಲ್ ಚಿಂತನಾ ವಿಜ್ಞಾನ ಪರೀಕ್ಷೆ, COMPU GEN EXAM, 6th ಇಂಟರನ್ಯಾಷನಲ್ ವಿಜ್ಞಾನ ಪರೀಕ್ಷೆ, ಸಿರಿಗನ್ನಡ ಪ್ರತಿಭಾ  ಪರೀಕ್ಷೆ-2009 ಇನ್ನು ಅನೇಕ ಪ್ರತಿಭಾ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಈಕೆ ಪ್ರಸ್ತುತ ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್  ಆಪ್ಹ್   ಟೆಕ್ನಾಲಜಿಯಲ್ಲಿ  ಇಂಜಿನಿಯರಿಂಗ್ ಪದವಿ ವ್ಯಾಸಾಂಗ ಮಾಡುತ್ತಿದ್ದಾಳೆ.
       ಹೀಗೆ ಶಿಕ್ಷಣ, ಸಂಗೀತ,ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದು. ಪಾಲಕರ,ಗುರುಗಳ, ಗೆಳೆಯರ ಪ್ರೋತ್ಸಾಹ ಹಾಗು ತನ್ನ ಕಠಿಣ ಅಭ್ಯಾಸವೇ ಈ ಸಾಧನೆಗೆ ಕಾರಣವೆನ್ನುವ ಸರಳತೆಯ ಶಾಂತಮೂರ್ತಿ “ಎಂ.ವೈ.ನಿಶ್ಚಿತ”ರವರ ಸಾಧನೆಯ ಪುಟಗಳ ಮೇಲೊಂದು ಅವಲೋಕನದ ನವಿಲುಗರಿ.

                                                                 


No comments:

Post a Comment