Showing posts with label ಹೊಂಗಿರಣ. Show all posts
Showing posts with label ಹೊಂಗಿರಣ. Show all posts

Thursday, August 14, 2014

ಕನ್ನಡದ ಆಯ್ದ ಮೊಜಲುಗಳು,

ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ 


ಬನವಾಸಿಯ ನಾಗಶಿಲ್ಪ

     1.       ಕನ್ನಡದ ಮೊದಲ ಶಿಲ್ಪ-  ಬನವಾಸಿಯ ನಾಗಶಿಲ್ಪ
     2.       ಕನ್ನಡದ ಮೊದಲ ಶಿಲ್ಪಿ-  ಬನವಾಸಿಯ ನಾಗಶಿಲ್ಪವನ್ನು ಕೆತ್ತಿದ ‘ಣಟಕ’
     3.       ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ.ಶ. ಸುಮಾರು 450)
 ಹಲ್ಮಿಡಿ ಶಾಸನ
    4.       ಮೊದಲ ಕೋಟೆ – ಬಾದಾಮಿ
    5.       ಪ್ರಾಚೀನ ದೇವಸ್ಥಾನ –ತಾಳಗುಂದದ ಪ್ರಣವೇಶ್ವರ ದೇಗುಲ
    6.       ಕನ್ನಡದ ಮೊದಲ ದೊರೆ- ಮಯೂರವರ್ಮ (ಕದಂಬ)
    7.       ಪ್ರಾಚೀನ ಶಾಸನ-ಬ್ರಹ್ಮಗಿರಿಯ ಅಶೋಕನ ಬಂಡೆಗಲ್ಲು ಶಾಸನ ಕ್ರಿ.ಪೂ.  ೩ನೆಯ  ಶತಮಾನ
    8.       ಪ್ರಾಚೀನ ಸಂಸ್ಕೃತ ಶಾಸನ- ಚಂದ್ರವಳ್ಳಿ (ಕ್ರಿ.ಶ. ಸುಮಾರು 350)

    9.       ಮೊದಲ ವೀರಗಲ್ಲು –ತಮಟಕಲ್ಲು (ಚಿತ್ರದುರ್ಗ )
   10. ಕನ್ನಡದ ಮೊದಲ ಪದ –“ಐಸಿಲ” (ಕೋಟೆ ಒಳಗಿನ ಊರು)

Wednesday, August 6, 2014

ಶೀಘ್ರದಲ್ಲಿ ನಗಾರಿ ನಾದ.....


       ಮನದಾಳದ ತವಕಕ್ಕೆ, ಹಲವು ವರ್ಷಗಳ ಯೋಚನೆಗೆ  ಈಗ ಕೂಡಿದೆ ಸಮಯ, ಹೂಡುತಿದೆ ಯೋಜನೆ. ಅಂತರ್ಜಾಲದಲ್ಲಿ ಕನ್ನಡದ ಸವಿನುಡಿಯ ಸೊಬಗ ಬೆಳಗಿಸಲು, ಉಸಿರನ್ನು ಹಸಿರಾಗಿಸುವ ಚಿಂತನೆಗೆ  “ನಗಾರಿ”ಯ ನಾದದ  ಜೇಂಕಾರ ಇನ್ನೂ ಎರಡೇ ದಿನದಲ್ಲಿ  ಅಂತರ್ಜಾಲವ ಪ್ರವೇಶಿಸಲಿದೆ.
         
        ಮನದಾಳದ ಮಾತಿಗೆ “ಅಂತರಂಗದ ಮೃದಂಗ”, ಬಾಲರ ಚಿಲಿಪಿಲಿ ನಾದಕ್ಕೆ “ಮಕ್ಕಳ ಧ್ವನಿ”, ಸಾಧನೆಯ ಅಭಿವ್ಯಕ್ತಿಗೆ “ಶಿಕಾರಿ”, ಕನ್ನಡದ ಮೊಜಲುಗಳಿಗೆ “ಹೊಂಗಿರಣ”, ಇನ್ನು ಅನೇಕ ಅಂಕಣಗಳನ್ನು  ಹೊತ್ತುಬರುತ್ತಿರುವ ಈ ನಗಾರಿ ನುಡಿಲೋಕಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ....
                          ಶೀಘ್ರದಲ್ಲಿ ನಗಾರಿ ಶ್ರುತಿ ಕೇಳಿಸುವೆ...

       - ಮನಿ