ಮಾನವನ ಜೀವನ ಮುಳುಗಿದೆ ಹಣದ ಭರದಲ್ಲಿ
ಹಣ ತುಂಬಿ ತುಳುಕುತ್ತಿದೆ ಸಾಗರದ ರಭಸದಲ್ಲಿ
ಸಿರಿವಂತರ ಹಣದ ಬಳಕೆಯ ರೀತಿ
ಇದು ಬಡವರ ಪಾಲಿಗೆ ಬಾಳಿನ ಭೀತಿ
ಹಣವಿದ್ದರೆ ಆಗುವನು ಸಕಲ ಭಾಗ್ಯ ಸತ್ಪಾತ್ರ
ಇಲ್ಲದಿದ್ದರೆ ಹಿಡಿಯುವನು ಚಿಂತೆಯೆಂಬ ದುರ್ಭಗ್ಯದ ಪಾತ್ರ
ಬಿಸಿ ಏರುತಿದೆ ಬಡವರ ನರನಾಡಿಗಳಲಿ
ಮಾನವನ ಜೀವನಕ್ಕೆ ಅವಶ್ಯವಾಗಿರಬೇಕು ಕಾಂಚನ
ಹಣ ಇಲ್ಲದೆ ಆಗುವುದು ಅವನ ಬಾಳು ಹರಣ
ಜೀವನ ಎಂಬ ಮಂತ್ರ ಅಡಗಿದೆ ಹಣದಲ್ಲಿ
ಅದನ್ನು ನಡಿಸಿಕೊಂಡು ಹೋಗುವ ತಂತ್ರ ನಮ್ಮಲಿರಲಿ||
ಸೌಮ್ಯ ಜೋಷಿ,
ಇಂಜಿನಿಯರಿಂಗ್ ವಿದ್ಯಾರ್ಥಿನಿ,
ಎಸ್.ಎಲ್.ಏನ್. ಕಾಲೇಜು ,
ರಾಯಚೂರು
|
No comments:
Post a Comment