
ನನ್ನ ಜೀವನದ ಆರಂಭ ಗಳಿಗೆಯಲ್ಲಿ ಯಾವುದರ ಬಗ್ಗೆಯೂ ಯೋಚನೆಯಿಲ್ಲದೆ ಆನೆ ನಡೆದದ್ದೇ ಹಾದಿ ಎಂದು ತಿಳಿದು, ನನ್ನವರ ಮಾತಿಗೆ ನಿರಾಕರಣೆಯ ಪ್ರತ್ಯುತ್ತರ ನೀಡಿ, ಬರೀ ಜಂಜಾಟದ ಸ್ಪರ್ಧೆಯೇ ಜೀವನವೆಂದರಿತು ಬೇರೆಯೆವರಲ್ಲಿ ನನ್ನನ್ನು ತೂಕಿಸುತ್ತಾ ಅಜ್ಞಾನದ ಕಿಚ್ಚಿನೊಳು ಧಾವಿಸಲು ನಿಂತಾಗ ಕ್ರಷ್ಣನ ಪಾಂಚಜನ್ಯದ ನಾದದಿಂದ ಹೇಗೆ ಅರ್ಜುನನು ಮತ್ತೆ ಉದಯಿಸಿದನು, ಹಾಗೇ ಹಿರಿಯರ ಒಂದು ತಿಳಿ ನುಡಿಯಿಂದ ನನ್ನ ಬಾಳ ಪಥವೇ ಬದಲಾಯಿಸಿಕೊಂಡಿತು, ಶಿಕ್ಷಕಿ ಕೃಷ್ಣವೇಣಿ ಯಿಂದ ನನ್ನಲ್ಲಿ ನನ್ನನ್ನು ಕಂಡೆ, ನನ್ನಲ್ಲಿನ ಯೋಚನೆಗೆ, ಬರಹದ ನಾಂದಿಗೆ ಶಿಕ್ಸಕ ರಾಜೇಂದ್ರ ಮಡಿಕುಲ್ ಸಲಹೆ, ಭಾಷಾ ಪ್ರಪಂಚದ ಸೊಗಡಿಗೆ ನನ್ನನ್ನು ಎಳೆದು ಧಾರೆ ಎರೆದು,ಅಂಜಿಕೆಯ ಅಜ್ನಾನಕ್ಕೆ ವೇದಿಕೆಯ ಕಿಚ್ಚು
ಹಚ್ಚಿಸಿದ, ಗುರಿಯ ಯಸಸ್ಸಿಗೆ ಬೆನ್ನೆಲುಬಾಗಿ ನಿಂತಿರುವ ನನ್ನ ಮೆಚ್ಚಿನ ಬಾಳಗುರು ಶಿರಿಯಾರ ಗಣೇಶ ನಾಯಕ್ ಮತ್ತು ನನ್ನ ಪ್ರತಿ ಹೆಜ್ಜೆಗೂ ಬೆಂಬಲಿಸಿ, ಬೋಧಿಸಿ, ತಪ್ಪು ಒಪ್ಪುಗಳ ವಿಚಾರ ಧಾರೆಯನ್ನು ಒಣಬಡಿಸಿದ ಎಲ್ಲಾ ಸ್ನೇಹಿತಮಿತ್ರರಂತಿದ್ದ ಸಹೃದಯೀ ಗುರುವೃಂದದವರಿಗೆ ಕೃತಜ್ಞತೆಯ ಮಹಾಪೂರ.
"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬ ಅರ್ಥವತ್ತಾದ ಕವಿ ಸಾಲಿಗೆ ನಾವಿಂದು ತಲೆದೂಗಬೇಕಾಗಿದೆ. ಬದುಕಿನ ಪ್ರತಿಕ್ಷಣದ ಗುರುವಿನ ಹಂಬಲ ಈ "ಗುರು" ಎಂಬ ಮಹಾಪುರುಷನ ಗುಣಗಾನ ಮಾಡುತ್ತದೆ. ಅಂದು ಕೃಷ್ಣನ "ಭಗವಧ್ಗೀತೆ"ಯ ಪಾಂಚಜನ್ಯ ಬೋಧನೆ,ಇಂದು ಶಿಕ್ಷಕರ ಲಾಲನೆ-ಪಾಲನೆಗೆ "ನಗಾರಿ"ಯ ನಾದಲೀಲೆ. ಅಂತಹ ತೇಜೋಮಯ ಪಂಕ್ತಿಯಲ್ಲಿ ಸದಾ ರಾರಾಜಿಸುವ ಎಲ್ಲಾ ಪ್ರಿಯ ಜ್ಞಾನದಾತರಿಗೆ ನಗಾರಿಯ ಶೃತಿಗಾರನ ಅಕ್ಷರ ಪುಂಜದಿಂದ ಸರ್ವಪಲ್ಲಿ ರಾಧಾಕೃಷ್ಣನ್ ನವರ ಜನ್ಮದಿನವನ್ನೇ ಶಿಕ್ಷಕರಿಗೆ ಮೂಡಿಪಾಗಿಸಿದ "ಶಿಕ್ಷಕರ ದಿನಾಚರಣೆ"ಯ ಹಾರ್ದಿಕ ಶುಭಾಶಯಗಳು.
No comments:
Post a Comment