ಬಹಳ ಯೋಚನೆ ಹಂದರದಲ್ಲೂ, ಅವಸರದಿಂದ ಅಂತರಜಾಲದಲ್ಲಿ ನಗಾರಿಯ ಡಿಂಡಿಮವ ಬಾರಿಸಿದೆ. ಅಂಬೆಗಾಲು ಇಡುವ ಈ ಕೂಸಿಗೆ ತೊದಲು ನುಡಿಯ "ಅಮ್ಮ"ಎಂಬ ನುಡಿಯ ಹೊರತು ಬೇರೆ ಮಾತಿಗೆ ನಾಲಿಗೆ ಆಡದು. ಮನದಾಳದ ಮೂರ್ತ ಬಾವನೆಗೆ, ತಲೆಗೆ ಹೊಳೆದ ಅಕ್ಷರಪುಂಜಕ್ಕೆ, ಕೈ ಗಿಚಿದೆಡೆ ಬರೆದು ಪ್ರಕಟಿಸುವ ವ್ಯಾಕ್ಯಾನಕ್ಕೆ ಈ ನಗಾರಿಯ ವೇದಿಕೆ ಸಜ್ಜುಗೊಳಿಸಿ ಅನಾವರಣಗೊಲಿಸಿದ್ದೇನೆ.
ಸಹೃದಯೀ ಓದುಗರ ಆಶೀರ್ವಾದದ ಫಲದಿಂದ "ನಗಾರಿ" ಬ್ಲಾಗ್ ತನ್ನ 1000+ ವೀಕ್ಷಕರ ವೀಕ್ಷಣೆಯ ಮೈಲಿಗಲ್ಲಿಗೆ ಪಾದಾರ್ಪಣೆಗೈದು ಅಂಬೆಗಾಲಿನ ತೊದಲು ಚೆಷ್ಟೇಗೆ ಆಹ್ವಾನ ನೀಡಿದ ತಮಗೆಲ್ಲರಿಗೂ ನನ್ನ ಬರಹದ ಕಪಿ(ಕವಿ)ಚೆಷ್ಟೇಯ ಬೆಂಬಲಿಸಿ, ಪ್ರೋತ್ಸಾಯಿಸಿದ ನಿಮಗೆಲ್ಲರಿಗೂ ನಗಾರಿಯ ಶ್ರುತಿಗಾರನಿಂದ ಕೃತಜ್ಞತೆಯ ಅಭಾರಿ...
ತೊದಲು ನುಡಿಯುತ್ತ, ಅಂಬೆಗಾಲಿಟ್ಟ ಕಪಿಚೆಷ್ಟೇಗಳ ಸಂಕ್ಷಿಪ್ತ ನೋಟ..
No comments:
Post a Comment